Tuesday, December 21, 2010

ಸಂಥಿಂಗ್ ಸ್ಪೆಷಲ್ ಥಿಂಗ್

ಸಂಥಿಂಗ್  ಸ್ಪೆಷಲ್ ಥಿಂಗ್

ಲೇ ಕಳ್ಳಿ! ಯಾಕೆ ಒಂದು ವಾರದಿಂದ ಜಾಗಿಂಗಿಗೆ ಬರ್ತಿಲ್ಲ?
ನಿನ್ನಲ್ಲಿ ಏನೋ... ಸಂಥಿಂಗ್  ಸ್ಪೆಷಲ್ ಥಿಂಗ್  ಅವೆತಿದೆ ಅನ್ನಿಸುತ್ತೆ ಕಣೇ ನನಗೆ.
ಯಾವತ್ತಿಗೂ ಲೈಫಲ್ಲಿ ಒಂದು ದಿನವೂ  ಮುಂಜಾನೆ ಮಂಜು ಹೇಗಿರುತ್ತೆ ಅನ್ನೋದನ್ನ ನೋಡಿರದ  ಮಹಾತ್ಮ  ನಾನು. ಯಾವಾಗ್ಲೂ  ಆಫ್ಟರ್ನೂನ್ಗಳೇ.. ನನ್ನ  ಮಾರ್ನಿಂಗ್ ಗಳಾಗಿಹೊಗಿದ್ದವು.ಇತ್ತೀಚೆಗೆ, ಯಾಕೋ....! ಲೈಫ್ ಕ೦ಪ್ಲೀಟಾಗಿ ಚೇಂಜ್ ಆಗೋಗಿದೆ ಅನ್ನೋ ಒಂದು ಫೀಲ್ ನನ್ನಲ್ಲಿ ಜನ್ಮತಳೆದುಬಿಟ್ಟಿದೆ.

          ಅವತ್ತೊಂದಿನ.....!
ಈ ಬೇಸಿಗೆಯ  ಮುಂಜಾನೆ ಸೆಕೆಯಲ್ಲಿ ನಿದ್ರೆ ಬಾರದೇ ನನ್ನ ಪ್ರೀತಿಯ ನಿದ್ರಾದೇವಿಯ ಮಡಿಲಿನಿಂದ ಜಾರಿ, ಹೊರಗೆ ಬಂದಿದ್ದೆ. ಅಲ್ಲೇ ಕಾದಿತ್ತು ಅನ್ನಿಸುತ್ತೆ, ನನ್ನಂತಾ ಒಬ್ಬ ಜೂನಿಯರ್ ವಿಶ್ವಾಮಿತ್ರನ ಬ್ರ೦ಹಚರ್ಯದ ಹುಚ್ಚೊಂದನ್ನ  ಭಗ್ನಗೊಳಿಸೋ ನಿನ್ನತಾ ಬೆಡಗಿಯೊಬ್ಬಳ ಆ ಕಳ್ಳನೋಟ. ನಿನಗ್ ಗೊತ್ತಾ? ಈಗ್ಲೂ ನಾ ನಿನ್ನ ಮೊದಲಸಲ ನೋಡಿದ ಆ ಅದ್ಭುತ ಕ್ಷಣವೊಂದಿದ್ಯಲ್ಲಾ ಅದನ್ನ ನೆನೆಸಿಕೊಂಡ್ರೆ.....! ಅದು , ಈಗ್ಲೂ ನನ್ನ ಕಣ್ಮುಂದೆ ಹಾಗೇ.... ಹಾದುಹೋದಂತಾಗುತ್ತೆ. ಆ ಮುಂಜಾನೆ....! ಸೋಮಾರಿ ಸೂರ್ಯ ನನಗಿಂತಲೂ ಒಂದ್ಗಂಟೆ, ಲೇಟಾಗಿದ್ದ. ಮೈಯ್ಯಲ್ಲಿ ಬೊಜ್ಜು ತುಂಬಿಕೊಂಡು, ನಡೆಯಲೂ ಆಗದೆ, ಬೆವೆತು ಓದುತ್ತಿದ್ದ ಕೆಲವು ಅಂಕಲ್ ಗಳ ಹಿಂದೆ ಅವಿತುಹೋಗಿದ್ದ ಅಷ್ಟೇನೂ ಸಕ್ಕತ್ ಸ್ಲಿಮ್ಮಾಗಿರದ ಸಕ್ಕತ್ ಸಿಂಪಲ್ ಹುಡುಗಿಯೊಬ್ಬಳು ಅವರನ್ನೆಲ್ಲಾ  ಓವರ್ಟೇಕ್ ಮಾಡಿ, ಮುನ್ನುಗ್ಗುತ್ತಿದ್ದಳು. ಮನಸ್ಸು ಬೇಡ ಎನ್ನುತ್ತಿದ್ದರೂ ಕಣ್ಗಳು ನನ್ನ ಮಾತನ್ನು ಕೇಳದೇ ನೀ ದಾವಿಸುತ್ತಿದ್ದೆಡೆಗೆ ಲಗ್ಗೆ ಹಾಕುತ್ತಿದ್ದವು. ಅಷ್ಟೆ. ನಾನು ಕ್ಲೀನ್ ಬೋರ್ಡ್. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಯಾವತ್ತೂ ಹುಡುಗಿಯರನ್ನ ನೋಡಿಯೇ ಇಲ್ಲ ಎನ್ನುವಹಾಗೆ ಕಣ್ಣುಮಿಟುಕಿಸದೆ ನಿನ್ನನ್ನೇ ನೋಡುತ್ತಿದ್ದ ನನ್ನ ಕಡೆಗೆ ಮೊದಲದಿನವೇ ನೀನೂ ಸಹಾ ನನ್ನನ್ನೇ ನೋಡಿಕೊಂಡು ಓಡುತಿದ್ದೆ. ಅಷ್ಟೇ. ನಾನು ಇನ್ನೊಂದು ಬಾರಿ ಕ೦ಪ್ಲೀಟಾಗಿ ಕ್ಲೀನ್ ಬೋರ್ಡ್. ನಾನೆಲ್ಲೋ ನಿನ್ನ ರಾಹುಕಾಲದಲ್ಲಿ  ದರುಶನ ಮಾಡಿರಬೇಕು ಅನ್ಸುತ್ತೆ. ಯಾಕೆಗೊತ್ತಾ? ನಾ ನಿನ್ನ ನೋಡಿದ ಆ ಮೊದಲನೇ ದಿನವೇ ಕೊನೆಯ ದಿನವಾಗಿಹೋಗಿತ್ತು. ಮತ್ತೆ ನನ್ನ ಜೀವನದಲ್ಲಿ ಅಂತ ಅದ್ಭುತ ಘಳಿಗೆ ಇನ್ನೊಂದು ಬಾರಿ ಬರಲೇ ಇಲ್ಲ. ಅಂದರೆ...! ನೀ ಮತ್ತೆ ಮಾರನೇ ದಿನದಿಂದ ಆ ರಸ್ತೆಯಲ್ಲಿ ನನಗೆ ಕಾಣಲೇ ಇಲ್ಲ.

      ನನಗೆ  ನೀನ್ ಯಾರೋ ಗೊತ್ತಿಲ್ಲ. ನಿನ್ ಹೆಸರು, ಕುಲ, ಗೋತ್ರ, ನಿನ್ ವಿಳಾಸ, ಏನಂದ್ರೆ ಏನೂ ಗೊತ್ತಿಲ್ಲ. ಅಷ್ಟೆಲ್ಲಾ ಯಾಕೆ ನೀನು ನನ್ನ ಕನ್ನಡದ ಹುಡುಗಿಯೋ ಅಲ್ಲವೋ.... ಅದೂ....ಗೊತ್ತಿಲ್ಲ. ನೀನೇನೋ... ಒಂದು ಲುಕ್ ಕೊಟ್ಟು ಹೊರಟುಹೋದೆ. ಆದರೆ ನಾನು ಇಲ್ಲಿ ಒಂದು ವಾರದಿಂದ ಪ್ರತೀ ದಿನ ನೀ ಬರುವ ಸಮಯಕ್ಕೆ ಮುಂಚೆಯೇ ಎದ್ದು, ನಿನ್ನ ದಾರಿಕಾಯೋ ಕೆಲಸಹಿಡಿದಿದ್ದೇನೆ.
   ಅದೆಲ್ಲ ಇರ್ರ್ಲಿ. ನಾ  ಈ ಪತ್ರವನ್ನ ಯಾಕೆ ಬರೆದೆಅಂದ್ರೆ..! ಒಂದು ವೇಳೆ ನೀನೇನಾದ್ರೂ.. ನನ್ನ ಕನ್ನಡದ ಹುಡುಗಿಯಾಗಿದ್ದು....., ನಿನಗೇನಾದ್ರೂ... ಕನ್ನಡ ಓದೋಕ್ಕೆ ಬರೋದೇಆದ್ರೆ...., ಅದರಲ್ಲೂ ಈ ನನ್ನ ಪತ್ರ ನಿನ್ನ್ ಕಣ್ಣಿಗೆ ಕಂಡು.., ನಿನಗೆ ಓದಬೇಕು ಅನ್ನಿಸಿದ್ದಲ್ಲಿ...! ಪ್ಲೀಸ್ ಇನ್ನೊಮ್ಮೆ ನನ್ನನ್ನ ಆ ರೀತಿ ನೋಡ್ಬೇಡ ಕಣೆ ಹುಡುಗಿ. ಯಾಕೆಂದ್ರೆ ನನಗೆ ನಿನಗಾಗಿ ಕಾಯೋ ಈ ಫೀಲ್ ಇದ್ಯಲ್ಲಾ..! ಇದನ್ನ ಮಿಸ್ ಮಾಡಿಕೊಳ್ಳೋಕೆ ಇಷ್ಟ ಇಲ್ಲ.

      ಇಂತಿ ನಿನ್ನ ದರುಶನದ ಕಾಯುವಿಕೆಯ ಒಡೆಯ

Monday, December 20, 2010

 2004 ನೇ ಇಸವಿಯ ಶಬ್ಧರಹಿತ ದಿವಂಗತ ಪ್ರೇಮ ಕಥನ

ಕೊನೆಗೂ ನಾ ನಿನಗೆ "ಹೇಳಿಬಿಡಬೇಕು" ಅಂತ ನಿರ್ಧಾರ ಮಾಡೇಬಿಟ್ಟೆ. ಆದ್ರೆ...! ಅದು ನಿನ್ ಎದುರಿನಲ್ಲಲ್ಲ. ಅದು ಈ ಪತ್ರದ ಮೂಲಕ. ಯಾಕೆಂದ್ರೆ....! ನನಗೆ ನಿನ್ನೆದುರು ನಿಂತು, ಮಾತ್ನಾಡೋ ಶಕ್ತೀನ ಆ ದೇವರು ಕೊನೆಗೂ ಕೊಡಲೇ ಇಲ್ಲ.

        ಅದು  2004 ನೇ ಇಸವಿಯಲ್ಲಿ, ಬೆಂಗಳೂರು ಅನ್ನೋ ಒಂದು ಸುಂದರವಾದ ತಾಜ್ ಮಹಲ್ ನಲ್ಲಿ ನಡೆದ ಅಷ್ಟೇನೂ ಕುತೂಹಲಕಾರಿಯಲ್ಲದ ಒಂದು ಪುಟ್ಟ ಶಬ್ಧರಹಿತ ದಿವಂಗತ ಪ್ರೇಮ ಕಥನ.

        "ನಾವೇನನ್ನೋ ಕಳೆದುಕೊಂಡಿದ್ದೀವಿ, ನಮಗೇನೋ ಹೊಸತುಬೇಕು" ಅನ್ನಿಸುವಂತ ವಯಸ್ಸಾಗಿತ್ತು ನನ್ನದು. ಅಂದ್ರೆ....! ನನಗಾಗ ಜಸ್ಟ್ ಹದಿನಾರು ವರ್ಷ.
      
ಆ ವಯಸ್ಸೇ ಹಾಗೆ, ಕಂಬಳಿ ಹುಳು ಚಿಟ್ಟೆಯಾಗೊ ಸಮಯದಂತೆ, ಮನಸ್ಸಿನಲ್ಲಿ ಅದೇನೇನೋ ಬಣ್ಣ ಬಣ್ಣದ ಆಸೆಗಳು ಹುಟ್ಟೋ ಕಾಲ. ಅದೇ ವಯಸ್ಸಿನಲ್ಲೇ "ನನಗೂ ಒಬ್ಬಳು ಗೆಳತಿ ಬೇಕು" ಎನ್ನಿಸಿದ್ದು. ಅದೇ ಕೇಡುಗಾಲಕ್ಕೆ ಅದೇ ಸಮಯದಲ್ಲೇ.... ನಿನ್ನನ್ನು ನನ್ನ ಎಸ್.ಎಸ್.ಎಲ್.ಸಿ ಟ್ಯೂಶನ್ ನಲ್ಲಿ ನೋಡಿದ್ದು.
        ನೀನ್ಯಾಕೋ.... ಅವತ್ತು ನನಗೆ ಒಂಥರಾ ಸ್ಪೆಶಲ್ ಹುಡುಗಿ ಥರಾ ಕಾಣಿಸಿದ್ದೆ. ' ಆ ನಿನ್ನ ಮುಗ್ಧ ಸುಂದರ ಕಣ್ಣ್ ಗಳ ಮೇಲಿದ್ದಂತಾ ಕಾಡಿಗೆ, ಆ ಕಂಗಳಿಗೆ "ದೃಷ್ಟಿ ತಾಕುವುದೇನೋ" ಎನ್ನೋ ಭಯದಿಂದ ಹಾಕಿದ್ದಂಥ ಆ ನಿನ್ನ ಕನ್ನಡಕ. ಕಿರು ಮಿಂಚಿನಂತಿದ್ದ ಆ ನಿನ್ನ ನಗು, ಆ ನಗುವಿಗೆ ಮತ್ತಷ್ಟು  ಶಕ್ತಿ ತುಂಬುತ್ತಿದ್ದ ನಿನ್ನ ಓರೆಯಾಗಿದ್ದ ಒಂದೇ ಒಂದು ಮೇಲ್ ಕೋರೆಹಲ್ಲು, ಇವನ್ನೆಲ್ಲಾ ನೋಡುತ್ತಿದ್ದಾಗ, ನನ್ನ ಮುಖದಿಂದ ಮಜಬೂತಾದ ನಗುವೊಂದು ಹುಟ್ಟಿ ಬಂದುಬಿಡುತ್ತಿತ್ತು.
ಇದೆಲ್ಲಾ ನನ್ ಜೀವನದಲ್ಲಿ ಎಂಟ್ರಿಕೊಟ್ಟ ಮೆಲೇನೇ, ನಾನು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಾಲ್ಕು ಸಲ ಫೇಲಾದದ್ದು. ಆದ್ರೆ ನೀ ಮಾತ್ರ ಒಂದೇ ಸಲ ಪಾಸ್ ಮಾಡ್ಕೊಂಡು, ಕಾಲೇಜಿನ ಮೆಟ್ಟಿಲು ಹತ್ತೇಬಿಟ್ಟೆ. ಆದರೆ, ನನಗೆ ಮಾತ್ರ ಎಸ್.ಎಸ್.ಎಲ್.ಸಿ ಪಾಸ್ ಮಾಡಲು, ಎರಡು ವರ್ಷ ಬೇಕಾಯ್ತು. ಅಷ್ಟರಲ್ಲಿ ನೀನು ಮತ್ತು ನಿನ್ನ ಕುಟುಂಬದವರು ನೀವಿದ್ದ ಮನೆಯನ್ನ ಕಾಲಿ ಮಾಡಿಬಿಟ್ಟಿದ್ದಿರಿ. ನಂತರ ಮನಸ್ಸಲ್ಲೇ 'ನನ್ನ ಪ್ರೀತಿ ಪರಿಶುದ್ದವಾಗಿದ್ದರೆ ಅದು ನನಗೆ ಹೇಗಾದರೂ ಸಿಕ್ಕೇ ಸಿಗುತ್ತೆ" ಎಂದು ಭಾವಿಸಿ, ನನ್ನ ಮುಂದಿನ ವಿಧ್ಯಾಭ್ಯಾಸವನ್ನ ಮುಂದುವರಿಸಿದೆ. ಆ-ನಿಮೇಶನ್ ಅನ್ನೋ ಒಂದು ಸುಂದರ ಪ್ರಪಂಚಕ್ಕೆ. ಮತ್ತೆ ಎರಡು ವರ್ಷಗಳ ನಂತರ ನಾ ನನ್ನ ವಿಧ್ಯಾಭ್ಯಾಸ ಮುಗುಸಿ ತಕ್ಷಣವೇ ಒಳ್ಳೇ ಕೆಲಸವನ್ನೂ ಸಂಪಾದಿಸಿದೆ. ಆದರೆ ಆ ಎರಡು ವರ್ಷಗಳಲ್ಲಿ, ನಿನ್ನನ್ನು ನಾ ಜ್ಞಾಪಿಸಿಕೊಳ್ಳದ  ಕ್ಷಣಗಳೇ ಇಲ್ಲ. ನಿನ್ನ ಹೆಸರಿರೋ ಯಾವೊಂದು ಪದವನ್ನ ನೋಡಿದ್ರೂ-ಕೇಳಿದ್ರೂ ನಿನ್ನದೇ ನೆನಪಾಗ್ತಿತ್ತು. ಕನ್ನಡಕ ಹಾಕಿದ ಯಾವ ಹುಡುಗಿಯನ್ನು ನೋಡಿದ್ರೂ... ನಿನ್ನನ್ನೇ ನೋಡಿದಹಾಗೆ ಆಗುತ್ತಿತ್ತು.
ಈ ನಾಲ್ಕು ವರ್ಷಗಳು ನಾ ನಿನ್ನ ನೋಡದೇ ಅದು ಹೇಗೆ ಇದ್ದೆ ಅನ್ನೋದನ್ನ ಮಾತ್ರ ಕೇಳ್ಬೇಡ. ಅದನ್ನ ನೆನೆಸಿಕೊಳ್ಳೋಕೆ ತುಂಬಾನೇ ಕಷ್ಟ ಆಗುತ್ತೆ ನನಗೆ.
     ಈ ನಾಲ್ಕು ವರ್ಷಗಳ ನಂತರ, 'ನೀನು ಒಂದು ಶಾಪಿಂಗ್ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದೀ' ಅಂತ ಗೊತ್ತಾಯ್ತು. ಇದನ್ನ ಕೇಳಿ ಆಶ್ಚರ್ಯವಾಯಿತು. 'ತಿಂದ ಊಟದ ತಟ್ಟೆಯನ್ನೂ ಸಹಾ ನಿನ್ನ ಕೈಲಿ ಎತ್ತಿಸದ ನಿನ್ನ ತಂದೆಯವರು ಈಗ ಹೇಗೆ ನಿನ್ನನ್ನು ಕೆಲಸಕ್ಕೆ ಕಳಿಸಿದರು?'' ಅನ್ನೋ ಪ್ರಶ್ನೆಗೆ ' ನಿಮ್ಮ ಕುಟುಂಬದ ಆರ್ಥಿಕ ಪರೀಸ್ಥಿತಿ ಈಗ ಮೊದಲಿನಂತಿಲ್ಲ. ನಿನ್ನ ತಂದೆಯವರ ಆರೋಗ್ಯವೂ ಸಹ ಕೆಟ್ಟಿದೆ. ಹಾಗಾಗಿ ನೀನು ಕೆಲಸಕ್ಕೆ ಸೇರಿದ್ದೀಯ" ಅನ್ನೋದು ನನಗೆ ಗೊತ್ತಾಯ್ತು.
   ಹಾಗೋ ಹೀಗೋ ನನ್ನ ಮೊದಲ ತಿಂಗಳ ಸಂಬಳ ಬ೦ದೇ ಬಿಟ್ಟಿತು. ಅವತ್ತು "ನಾ ನಿನ್ನನ್ನು ನೋಡಲೇ ಬೇಕು' ಅನ್ನೋ ಕಾತುರದಲ್ಲಿ ನೀ ಕೆಲಸ ಮಾಡೋ ಜಾಗಕ್ಕೆ ಬಂದೇಬಿಟ್ಟೆ. ನಿನ್ನನ್ನು ಅಲ್ಲಿ ಬಹಳಾನೇ ಹುಡುಕಾಡಿಬಿಟ್ಟೆ. ಆದರೆ, ನೀ ನನಗೆ ಸಿಗಲೇ ಇಲ್ಲ. ಅಲ್ಲೇ ಇದ್ದ ಒಂದು ಶರ್ಟ್ ಸೆಲೆಕ್ಟ್ ಮಾಡಿ, ಅಲ್ಲಿದ್ದ ಒಬ್ಬ ಸೇಲ್ಸ್ ಮನ್ ಗೆ 'ಈ ತರಹದ ನನ್ನ ಸೈಜ್ ಶರ್ಟ್ ಕೊಡ್ತೀರಾ?" ಅಂತ ಕೇಳಿದೆ. ಆದರೆ ನನಗೆ ನಂತರ ಶರ್ಟ್ ತಂದು ಕೊಟ್ಟಿದ್ದು ನೀನು...!

    ಆದರೆ.... !
'ನಿನ್ನನ್ನು ನೋಡಬೇಕು ಎಂದು' ಅಷ್ಟೊಂದು ಆಸೆಯಿಂದ ಬಂದ ನನಗೆ ಅಲ್ಲಿ ಆ ಕ್ಷಣ ಖುಷಿಯಾಗಲಿಲ್ಲ. ಮೊದಲನೇ ಸಲ ನಾನಿನ್ನ ಕಂಡಾಗ ನಿನ್ನ ಕಣ್ಗಳಲ್ಲಿದ್ದ ಆ ಕಾಂತಿ ಇರಲಿಲ್ಲ. ನಿನ್ನ ಮುಖದಲ್ಲಿ ಸದಾ ಅರಳುತ್ತಿದ್ದ ಆ ಪುಟ್ಟ ನಗು ಸತ್ತು ಹೋಗಿತ್ತು. ನಿನ್ನ ಕಂಡಾಗ ನನ್ನ ತುಟಿಗಳ ಮೇಲೆ ಉಕ್ಕಿಬರುತ್ತಿತ್ತಲ್ಲ ಆ ನಗು? ಅದಕ್ಕೆ ಬದಲಾಗಿ ಈಗ ನನ್ನ ಕಂಗಳಲ್ಲಿ ನೀರು ತುಂಬೀಹೋಗಿತ್ತು. ಆದರೆ ಎಲ್ಲಕ್ಕಿಂತ ನನಗೆ ಅಲ್ಲಿ ನೋವುಂಟುಮಾಡಿದ ಸಂಗತಿಯೆಂದರೆ, ನೀ ನನ್ನನ್ನು ಕೊನೆಗೂ ಗುರುತು ಹಿಡಿಯಲೇ ಇಲ್ಲ. ಅಂದು ನಿನ್ನ ಕೈ ಸೋಕಿದ ಆ ಶಾರ್ಟ್ ಈಗಲೂ ಸಹಾ ನನ್ನ ಫೇವ್ ರೆಟ್ ಶರ್ಟ್ ಆಗಿದೆ, ನಿನ್ನಿಂದ ನಾ ಕದ್ದ ಕೆಲವು ವಸ್ತುಗಳನ್ನು ಇನ್ನೂ ನನ್ನ  ಬಳಿಯೇ  ಇರಿಸಿಕೊಂಡಿದ್ದೇನೇ



ಇಂತಿ ಈಗ ನಿನ್ನವನಲ್ಲದವ

Sunday, December 19, 2010

 ಇಚ್ಛೆ, ಹೆಸರು, ಕ್ಷಣ


ಅಂದು, ನನ್ ಮನದಾಳದ
ನಿರ್ವಂಚನೆಯ,
ಪ್ರೀತಿಯ ಪ್ರಶಾಂತತೆಗಳ ಇಚ್ಛೆ ನೀನು.

ಇಂದು, ನನ್ನೊಡಲಿನೊಳಗಿನ
ವೇಧನೆಯ ಹೆಸರು ನೀನು.

ಮುಂದೊಂದಿನ, ನನ್ ಬಾಳಿನ
ಮೃತ್ಯುವಿನ ಮಡಿಲ ಅಂತಿಮ
ಕ್ಷಣ ನೀನು.
ನನ್ ಮನೆಯೆದುರಿನ
ನಿನ್ ಮನೆಯಂಗಳದಿ
ಜನ್ಮತಳೆದ ಗುಲಾಬಿ ಮರಿಯೊಂದು
ಅಳುಮೋರೆ ಮಾಡಿ,
 ಎನ್ನನ್ನೇ ಧಿಟ್ಟಿಸಿ ನೋಡುತ್ತಿದ್ದಹ೦ಗಿತ್ತು.
ಬಹುಶಃ  ಆ ಮರಿಗೆ,
 ನಿನ್ನ ಮುಡಿಯಲಿನ
 ಕಚಗುಳಿಯಾಡಿಸುವ
ಸ್ಥಳವಿಲ್ಲವಾಯಿತೇನೋ......!
ಬಾರದಿರಲಿ ಗೆಳತಿ,
ಎಂದೂ ಬಾರದಿರಲಿ......

ನಮ್ಮಿಬ್ಬರ ಮೊದಲ ಚುಂಬನದ
ದಿವಸದ ಮೊದಲ ಸತ್ಯದಿ ಮೂಡಿದ
ಮುನಿಸಿನ ಯುಗದಂತಾ ಕ್ಷಣಗಳು
ಬಾರದಿರಲಿ.
ನೀ ಈಗ ಸುಖದ
ಸುಪ್ಪತ್ತಿಗೆಯಲಿನ ಮಹಾರಾಣಿಯಲ್ಲ
ಆದರೆ,
ನಾ ಮಾತ್ರ ಮುಂದೊಂದಿನ
ನಿನ್ನ ಪ್ರೀತಿಯ ಸಾಮ್ರಾಜ್ಯದೊಳು
ಸೇವಕನಾಗುವುದು ಮಾತ್ರ
ಕಚಿತ.....
"ಸ್ನೇಹವಿದು" ಎನ್ನಲು
ಗೆಳತಿ ನೀನಲ್ಲ.
"ಪ್ರೇಮವಿದು" ಎನ್ನಲು
ಸಖನೂ ನಾನಲ್ಲ.
"ರಕ್ತ-ಕರುಳಿನ ಸಂಭಂಧ"ವೆನಲು
ಸಾದ್ಯವೇ ಇಲ್ಲ.
ಆದರೂ, ಈ ಎನ್ನ ಪುಟ್ಟ ಹೃದಯದಿ ಬಡಿದಾಡಿತೊಂದು ಪ್ರಶ್ನೆ
"ಏನಿದೀ ಮೈತ್ರಿ?"
ಅದೇ ನನ್ನ ಜೀವನದ ಮಹಾಪ್ರಶ್ನೆ.
ಆಕೆ- "ಸ್ವರ್ಗ ಎಂದರೇನು?
ನಾ- "ಎನಗರಿಯದು.
ಬಹುಶಃ...........
ಆ ನಿನ್ ಕಂಗಳ ಓರೆ ನೋಟವಾಗಿರಬಹುದು,
ನಿನ್ ತುಟಿಗಳಿಂದೆ ಬಚ್ಚಿಟ್ಟುಕೊಂಡ ನಗೆಯಿರಬಹುದು,
ನಿನ್ ಕಾಲ್ಗೆಜ್ಜೆಯ ಸದ್ದಿರಬಹುದು,
ಅಥವಾ
ನಿನ್ ಜೊತೆಗಾಡುವ ಮಾತುಗಳೂ ಆಗಿರಬಹುದು.
ಅದು ನಾನರಿಯೆ.
ಆದರೆ.....!
ನರಕವೆಂದರೆ ಮಾತ್ರ..... ನೀನಿಲ್ಲದ ಎನ್ನ ಬಾಳಿನ ಕ್ಷಣಗಳೆನ್ನಬಲ್ಲೆ."
ಒಮ್ಮೆ ನಾ ನಿನ್ನ
"ಎನ್ನ ಉಸಿರು ನೀ"
ಎಂದೆ.
ಇಂದು ನೀ ಎನ್ನ
"ನಿನ್ನ ಉಸಿರಿಗೆ ಹೆಸರು ನಾ"
ಎಂದೆ.
ದೇವ್ರು ನನಗೇ ಹೀಗೆ ಮೋಸ ಮಾಡಬಹುದ?

ಗೆಳತಿ, ಇಂದು ನನ್ನೊಡನೆ ನೀನಿಲ್ಲ. ಆದ್ರೂ... ನನಗೇನೂ ಬೇಜಾರಿಲ್ಲಾ ಕಣೇ ಚಿನ್ನು.....! ಯಾಕೆ ಗೊತ್ತಾ? ನೀ ದೂರಾದದ್ದು ನನ್ನ ಕಂಗಳಿಂದ ಮಾತ್ರ. ನನ್ನ ಮನಸ್ಸಿನ ನೆನಪುಗಳ ಪುಟಗಳಿಂದಲ್ಲ. ನಿನ್ನ ಜೊತೆ ಕಳೆದ ಕ್ಷಣಗಳನ್ನು ಕೋಟಿಜನ್ಮಗಳಾದ್ರೂ... ಮರೆಯಲು ಅಸಾದ್ಯ ಎನ್ನಿಂದ.
ಒಂದುವೇಳೆ ನಾನೇನಾದ್ರು... ದೇವದಾಸ್ ಥರ ಕುಡ್ದು-ಕುಡ್ದು ಪ್ರಾಣ ಬಿಟ್ರೆ ನನ್ನ ಬಗ್ಗೆ ನನ್ನಷ್ಟು ಖುಷಿ ಪಡೊ ಜೀವ ಈ ಧರಣಿಯಲ್ಲಿ ಇನ್ನೊ೦ದಿರಲಾರದು. ಯಾಕೆ ಗೊತ್ತಾ? ಈ ಪ್ರಾಣ ಹೋಗೋದು ನಿನಗೋಸ್ಕರವೇ ಜನಿಸಿದ ನನ್ನ ಪ್ರೀತಿಗೋಸ್ಕರ! .... ಚಿಂತೆ ಮಾಡ್ಬೇಡ ಚಿನ್ನು, ಹಾಗೆಲ್ಲಾ ಏನೂ ಆಗೋಲ್ಲ ನಂಗೆ. ನನ್ನದು ಆ ರೀತಿ ಕ್ಯಾರೆಕ್ಟರ್ ಅಲ್ಲ ಅನ್ನೋದು ಗೊತ್ತುತಾನೆ ನಿನಗೆ?

ನೀ ಈ ಸಮಾಜದ ದೃಷ್ಟಿಯಿಂದ ದಿವಂಗತಳಾಗಿ, ಈಗ್ಗೆ ಆರು ವರ್ಷಗಳೇ ಕಳೆದುಹೋಯ್ತು. ಈ ಆರು ವರ್ಷಗಳಲ್ಲಿ ನಿನ್ನನ್ನು ಯಾರು ನೆನಪು ಮಾಡಿಕೊಳ್ಳುತ್ತಿದ್ದಾರೋ.... ನಾ ಕಾಣೆ. ಆದರೆ, ನನ್ನ ಈ ಆರುವರುಷಗಳ ಪ್ರತಿಯೊಂದು ಕ್ಷಣಗಳಲ್ಲಿ, ನಿನ್ನ ನೆನಪುಗಳಿಲ್ಲದ ಯಾವೊಂದು ದೃಶ್ಯಗಳೂ ನನಗೆ ಸಿಗಲೇಇಲ್ಲ.
ನಿನ್ನ ಮೊದಲ ಸಲ ನಾ ದರುಶನಗೈದ ಆ ಸ್ಥಳ,
ನೀ ನನ್ನ ಮೊದಲ ಸಲ ಮಾತನಾಡಿಸಿದ ಆ ಕಾಫೀ ಶಾಪ್‌ಗಳನ್ನೆಲ್ಲ ನೋಡ್ತಿದ್ರೆ, ನನ್ನ ಕಂಗಳುಗಳು ನನ್ನ ಹದೀನ ತಪ್ಪುತ್ತಿವೆ.

ಚಿನ್ನು..! ನೀ ನನಗೆ ಯಾವಾಗ್ಲೂ ಒಂದು ಪ್ರಶ್ನೆ ಕೇಳುತ್ತಿದ್ದೆ. ನಿನಗೆ ನೆನಪಿದೆಯೇ ಅದು? "ಯಾಕೋ...! ನೀನ್ ಯಾವಾಗ್ಲೂ ಇಷ್ಟು  ಸೈಲೆ೦ಟಾಗಿರ್ತಿ? ತುಂಬಾ ಬೋರಾಗುತ್ತಪ್ಪ ನಿನ್ ಜೊತೆಗಿದ್ರೆ. ಏನಾದ್ರೂ ಮಾತ್ನಾಡೊ!" ಅಂತ. ಆದರೆ, ಈ ಪ್ರಶ್ನೆಗೆ ನಾ ಉತ್ತರಿಸುವ ಮುನ್ನವೇ ನೀ ನನ್ನ ನಿನ್ನ ಪ್ರೀತಿಯ ತಬ್ಬಲಿಯನ್ನಾಗಿ ಮಾಡಿ ಹೊರಟೇ ಬಿಟ್ಟೆ... ಎಷ್ಟೇ ಆಗ್ಲೀ ನಾ ನಿನ್ನ ತುಂಬಾನೇ ಬೋರ್ಹೊಡಿಸಿಬಿಟ್ಟಿದ್ದೆ ಅಲ್ವಾ?

ಆದರೆ ನೀ ಮಾತ್ರ ಯಾವೊಂದು ಕ್ಷಣಗಳಲ್ಲೂ ನನಗೆ ಬೋರ್ ಹೊಡೆಯುವ ಹಾಗೆ ನಡೆದುಕೊಂಡೇ ಇರಲಿಲ್ಲ. ಒಂದೇ ನಿಮಿಷಕ್ಕೆ ಅದೆಷ್ಟೋ ಮಾತ್ನಾಡಿಬಿಡುತ್ತಿದ್ದೆ ಕಣೇ ಮಾರಾಯ್ತಿ ನೀನು...!
ಆ ನಿನ್ನ ತರಲೆ ಪ್ರಶ್ನೆಗಳು, ಪದೇ-ಪದೇ ಡೈಲಾಗಿಗೆ ಮುನ್ನ ಮತ್ತು ನಂತರ ನನ್ನನ್ನು ನೀ 'ಗೂಬೆ,ಕತ್ತೆ,ಗುಗ್ಗು,...' ಅಂತೆಲ್ಲಾ ಬೈತಿದ್ದೆ. ಜೊತೆಗೆ ನೀ ಹಾಡೋ ಕೆಲವು ಮಾತುಗಳನ್ನು ಕೇಳುತ್ತಾ ನಾ ನಿನ್ನನ್ನೇ ನೋಡುತ್ತಿದ್ದಾಗ, ಇದ್ದಕ್ಕಿದ್ದಹಾಗೆ ಪೆದ್ದ ನಾಚಿಕೆ ಕೂಡಿದ ನಗೆಯೊಂದನ್ನು ನನ್ನೆಡೆಗೆ ಬಿಸಾಡಿಬಿಡುತ್ತಿದ್ದೆ. ಇವೆಲ್ಲಾ ನನಗೆ ನೀನು ಪ್ರತೀ ದಿನ ಹೊಸದಾಗಿ ಕಾಣುವಂತೆ ಮಾಡಿಬಿಡುತ್ತಿದ್ದವು. 'ನಾ ಬರೆಯೋ ಪ್ರತೀ ಕವನಗಳಿಗೂ ಸ್ಪೂರ್ತಿ, ನೀನೆ.' ಅಂತ ನಾ ಅಂದಾಗ,ನಾಚಿಕೆಯಿಂದ ನಗುತ್ತಾ 'ಇದು ಯಾಕೋ ಸ್ವಲ್ಪ ಜಾಸ್ತಿ ಆಯ್ತು ಕಣೋ' ಅಂತಿದ್ದೆ ನೀನು.

ನಿನಗೆ ಗೊತ್ತಾ ಚಿನ್ನು? ಮೊದಲೆಲ್ಲಾ ಪ್ರತೀದಿನಾ ಒಂದೊಂದು ಕವಿತೆ ಬರೆದು ನಿನ್ನ ಬಳಿ 'ಕವಿ' ಅನ್ನಿಸಿಕೊಂಡುಬಿಟ್ಟಿದ್ದೆ. ಆದ್ರೆ ಈ ಆರು ವರ್ಷಗಳು ನನ್ನ ಕೈಲಿ ಒಂದೇ ಒಂದು ಸಾಲೂಸಹ ಬರೆಯಲು ಸಾದ್ಯವಾಗಲೇ ಇಲ್ಲ.

ನಿನ್ನ ಆ ಬಿಗಿ ಅಪ್ಪುಗೆಇಲ್ಲದೆ ಈ ನನ್ನ ತೋಳುಗಳು ಶಕ್ತಿಹೀನವಾಗಿವೆ.
ಆ ನಿನ್ನ ತಲೆಯ ಬಾರದ ಹೊರೆ ಈ ಎನ್ನ ಭುಜಗಳಿಗೀಗಿಲ್ಲದೇ, ಅವು ಧೈರ್ಯ ಕಳೆದುಕೊಂಡಿವೆ. ನಿನ್ನ ಚಿನಕುರುಳಿ ಮಾತುಗಳ ಕೇಳದೆ ನನ್ನ ಕಿವಿಗಳು ಕಿವುಡಾದ೦ತಿವೆ. ನಿನ್ಹುಸಿರ ಬಿಸಿಗಾಳಿ ಇಲ್ಲದೆ ನನ್ಹೆಸರು ಬಿರುಗಾಳಿಯಲ್ಲಿ ಲೀನವಾಗಿಹೋಗುತ್ತಿರುವಹಾಗಿದೆ. ನನಗೆ ಇವನ್ನೆಲ್ಲ ನೆನಪು ಮಾಡಿಕೊಳ್ಳುತ್ತಿದ್ದರೆ ನನ್ನ ತುಟಿಗಳ ಮೇಲೆ ನನಗೇ ಗೊತಿಲ್ಲದಹಾಗೆ ಪುಟ್ಟ ನಗೆಯ ಜೊತೆ ಕಣ್ಣ ಹಾನಿಯೊಂದು ಜಾರಿಬೀಳುತ್ತದೆ.

ಪ್ರೇಯಸಿಗೋಸ್ಕರ ಪ್ರಾಣತ್ಯಾಗ ಮಾಡೋ ಸ್ವಭಾವ ನನ್ನದಲ್ಲ. ಬದಲಾಗಿ, ನನ್ನ ಇಡೀ ಜೀವನವನ್ನ ನಿನ್ನ ನೆನಪು ಮಾಡಿಕೊಳ್ಳುತ್ತಲೇ ಇರಲೆಂದೇ ಜೀವನ ಮೀಸಲಿಟ್ಟ ಹುಚ್ಚು ಪ್ರೇಮಿ ನಾನು. ಈಗ ಹೇಳೆ ಚಿನ್ನು...! ಆ ದೇವರು ನನ್ನ೦ಥವನಿಗೆ.... ಇಂತಹ ದ್ರೋಹ ಮಾಡಬಹುದಾ...?


-ಇಂತಿ ನೀನಿಲ್ಲದವ
ಅಂದು ನೀ ಎನಗೆಂದೆ
"ನಾ ನಿನಗೇನು?"
ಅದಕ್ಕುತ್ತರ ಇಲ್ಲಿದೆ.

"ಎನ್ನ ಕೈಲಿನ ಕುಂಚದ ಬಣ್ಣ,
ಆ ಬಣ್ಣದೊಳು ನಾ ಮೂಡಿಸುವ ಚಿತ್ರ,
ಆ ಚಿತ್ರಕೆಂದೇ ನಾ ಬರೆವ ಕವನ,
ಆ ಕವನಗಳ ಅಕ್ಷರಗಳ ಸಾಲು ವಾಕ್ಯ,
ಆ ವಾಕ್ಯಗಳ ಅಪರಿಪೂರ್ಣ ಅರ್ಥ,
ಎನ್ನ ಅರ್ಥವಿಲ್ಲದ ಕವನಗಳಿಗೆಂದೇ
ಜನಿಸಿದ ನಿನ್ನ ಸಂಗೀತ,
ಆ ಸಂಗೀತವ ಹಾಡಲೆಂದೇ ಇರುವ ಈ ಎನ್ನ ಹುಸಿರು. ಇವೆಲ್ಲವೂ ನೀನೆ."

ಲೇ.....
ಆದರೆ .....
ಇಲ್ಲಿ ನಾನ್ಯಾರು?

Saturday, December 18, 2010

ನನ್ನೊಲುಮೆಯ ಬಾ೦ದಳದಿ
ಹೂವಾಗಿ ನಿಂದಾವಳು ನೀ.....!
ನಿನ್ ಮನಸಲಿ ನಾ ಇಂದು
ಇಲ್ಲವೆಂದೆಯಲ್ಲ ಏಕೆ?
ನಿನ್ ಉಸಿರಲಿನ ಹೆಸರಾಗಬೇಕೆಂಬ
ಆಸೆಯೊತ್ತವ ನಾನು.
ನಿನ್ ಹೆಸರಿಗೆ ನನ್ನ್ ಹುಸಿರು ಬೇಡವಾಯಿತೇಕೆ?........
ಅಂದು ನೀ ನಕ್ಕಾಗ ಎನಗೆ
ಕೇಳಿಸಲಿಲ್ಲ ಆ ನಿನ್ನ
ನಗೆಯ ಶಬ್ಧ.
ಬದಲಾಗಿ
ಕೇಳಿದ್ದು, ಎನ್ನ ಹ್ರುದಯದಿ
ಹೂಗಳರಲುವ ಸದ್ದಿನ ಅನುಭವ.

ನಿನ್ನ ಕಂಡ ಆ ಕ್ಷಣ
ಕೇವಲ ಕ್ಷಣವಾಗಿರಲಿಲ್ಲ ಎನಗೆ.
ಅಂದು, ಎನ್ನ ಮನದುಸಿರಲಿ
ಅಗತಾನೇ... ಪ್ರೇಮಾಗಂಗೆಯು
ಉಗಮಿಸಿದ ಅದ್ಭುತ ಘಳಿಗೆ.
ನನ್ನುಸಿರಲಿ, ಹೆಸರೇ... ಗೊತ್ತಿಲ್ಲದ
ನಿನ್ನ ನಾಮಕರಣ.
ಮುನ್ನುಡಿ

ಎನ್ನ ಬಾಳ ಪ್ರತಿಪುಟಗಳಲ್ಲೂ ನಾ ಹಂಬಲಿಸಿದ್ದ ಏಕೈಕ ಉತ್ತರವೆಂದರೆ,
"ಅದ್ಯಾಉದಯ್ಯ ನನ್ನ ಈ ಹೃದಯದ ಜೊತೆ"
ಬದಲಿಗೆ ಎನಗೆ ಸಿಕ್ಕಿದ್ದು ಆ ಏಕೈಕ ಉತ್ತರದಿ ಅಡಗಿದ್ದ ಮತ್ತದೆಶ್ಟೋ ಪ್ರಶ್ನೆಗಳು.
"ಜೀವನವೆಂದರೆ ಬರೀ ಪ್ರಶ್ನೆಗಳೇನ? ಅಥವಾ.....
ಆ ಉತ್ತರಗಳಲ್ಲದಾಗಿರುವ ಪ್ರಶ್ನೆಗಳ?"