Sunday, July 15, 2012


ಮರೆಯಲಾಗದ
ಮರುವು
ನೆನಪಾಗದ
ನೆನಪುಗಳ
ಪರಿಯು
ಈ ದಿನ
ಎನ್ನ ಪ್ರೀತಿಯ
ಹುಸಿರಿಲ್ಲದ ಹೆಸರು
By- (M.R) MadhusudhanRamesh

Wednesday, July 20, 2011

ನೀ ಏಕೆ ಬಂದೆಯೇ ಎನ್ನ ಬಾಳಿಗೆ?

ನಿನಗೆ ನಾ ಏಕೆ ಬೇಡವಾದೆ ಅನ್ನೋದು ನನಗೆ ಗೊತ್ತು.

ನೀನೋ ....! "ಕಲೇಜಿಗೇ..... ನಂಬರ್ ವನ್ ಸುಂದರಿ" ಎನ್ನಿಸಿಕೊಂಡಿದ್ದವಳು. ಅದೇ ನಾನು! "ಎಲ್ಲಾ ಹುಡುಗರಿಗಿಂತಲೂ, ವರ್ಸ್ಟ್ ಲುಕಿಂಗ್ ಬಾಯ್" ಎನ್ನಿಸಿಕೊಂಡ 26 ವರ್ಷದ ಶ್ರೀಮಂತ ಕುಟುಂಬದ ಹುಡುಗ.

" ಪ್ರೀತಿಗೆ ಕಣ್ಗಳಿಲ್ಲ" ಅಂತ ಹೇಳಿದ ಮಹಾಪುರುಷ ನನಗೇನಾದ್ರೂ ಸಿಗ್ಬೇಕು, ಅವನ ಗ್ರಹಚಾರ ಬಿಡಿಸಿಬಿಡ್ತೀನಿ. ಈ ಮಾತು 1972 ರಲ್ಲಿ ಅಣ್ಣಾವ್ರ ಸಿನಿಮಾಗಳಿಗೆ ಸರಿಹೋಗ್ತಿತ್ತೇನೋ! ಆದ್ರೆ, ಈಗಿನ 'ಜಂಗ್ಲಿ ಶಿವಲಿಂಗು' ಕಾಲದಲ್ಲಂತೂ ಅದು ಶುದ್ದ ಸುಳ್ಳಾಗಿಹೋಗಿದೆ.

ನಾನು ನೋಡೋಕೆ ತುಂಬಾ ಕೆಟ್ಟದಾಗಿದ್ದರೂ, ನನ್ನ ಗೆಳತಿ ಸಕ್ಕತ್ ಸುಂದರಿಯಾಗಿರಬೇಕು ಅನ್ನೋದು ನನ್ನಾಸೆಯಾಗಿತ್ತು. ಅದೇ ರೀತಿ, 'ಲವ್ ಅಟ್ ಫರ್ಸ್ಟ್ ಟೈಮ್' ಅನ್ನೋದು ನನ್ನ ಲೈಫ್ ಗೆ ನಿನ್ನಂತಹ ಅಪ್ಸರೆಯನ್ನ ನೋಡಿದ ಘಳಿಗೆಯಲ್ಲಿ ಆಗದೆ ಇರಲಿಲ್ಲ. ನಿನ್ನ ನಾ ಮೊದಲ ಸಲ ನೋಡಿದ್ದು ನಮ್ಮ ಕಾಲೇಜಿನಲ್ಲೇ. ಅವತ್ತು ನನ್ನ ಕ್ಲಾಲೇಜ್ ಫರ್ಸ್ಟ್ ಡೇ ಆಗಿತ್ತು. ಅವತ್ತಿನ ದಿನ ಕಾಲೇಜಿನಲ್ಲಿ ನನ್ನ ಸೀನಿಯರ್ಸ್ ನನ್ನ ಲೇವಡಿ  ಮಾಡ್ತಿದ್ರು. ನನ್ನ ಈ ಕೆಟ್ಟ ಗ್ಲಾಮರ್ ಬಗ್ಗೇನೂ ಹಾಸ್ಯ ಮಾಡ್ತೀದ್ರು. ಅವರಲ್ಲಿ ನೀ ಸಹಾ ಒಬ್ಬಳಾಗಿದ್ದೆ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದ ಮಾತುಗಳನ್ನು ಕೇಳಿ, 'ಅವರನ್ನು ಕೊಂಡುಬಿಡಬೇಕು" ಅನ್ನಿಸುತ್ತಿತ್ತು ನನಗೆ.ಅದ್ರೆ, ಅವರಲ್ಲಿ ನೀನೂ ಇದ್ದೇ ಅಲ್ವಾ! ಅದಕ್ಕೆ ಅನ್ನಿಸುತ್ತೆ ಕಣೆ ಚಿನ್ನು! ಆಗ ನನಗೆ ಬಂದ ಕೋಪ 'ಕಾದ ಎಂಚಿನ ಮೇಲಿಸ ಬೆಣ್ಣೆ ಕರಗಿ ತುಪ್ಪವಾದಹಾಗೆ' ನಗುವಾಗಿ ಪರಿವರ್ತನೆಯಾಗಿಹೋಯ್ತು.

ನಾ ಮೊದಲೇ ಬಲು ಕೋಪಿಷ್ಟ, ಇದಕ್ಕಿದ್ದಂತೆ ನಾ ಎಷ್ಟು ಸೈಲೆಂಟಾಗಿಹೋದೆ ಅನ್ನೋದು ನನಗೆ ನಿಜಕೂ ವಿಚಿತ್ರ ಎನ್ನಿಸುತ್ತಿದೆ. ಪ್ರತೀ ಸಲ ನಾ ನಿನ್ನ ಕಣ್ಣ ಮುಂದೆ ಕಾಣಿಸಿಕೊಂಡಾಗಲೂ ನಿ ನನ್ನ ಹೀಯಾಳಿಸುತ್ತಿದ್ದೆ. ಆಗ ನೀ ನನಗೆ ಪುಟ್ಟ ಮಗುವಿನಂತೆ ಕಾಣಿಸುತ್ತಿದ್ದೆ. ನನ್ನ ಮನವೆಂಬ ಮನೆಗೆ ಕಾಲುಇಡಬೇಕಾದ್ರೆ ಅದುನಿನ್ನಂತ ಹುಡುಗೀನೆ ಆಗಬೇಕು ಅನ್ನಿಸುತ್ತಿತ್ತು, ಈ ನನ್ನ ನರಳುತ್ತಿರುವ ಹೃದಯಕ್ಕೆ.

ನಾ ನನ್ನ ಜೀವನದಲ್ಲಿ ಏತಕ್ಕೂ ಹೆದರಿದವವಲ್ಲ. 'ಮೈನಲ್ 1/4 ಕೇಜೀ ಮಾಂಸ ಇಲ್ಲ ನಿಂಗೆ. ನಿನ್ನಂತಾವ್ಲಿಗೆ ' ಐ ಲವ್ ಯು ' ಅನ್ನೋ ಒಂದು ಸಣ್ಣ ಮಾತು ಹೇಳೋಕೆ ಎಷ್ಟು ಭಯ-ಕಷ್ಟ ಬಿದ್ದೆ ಅನ್ನೋದು ಗೊತೇನೆ ನಿಂಗೆ? ಹೇಗೋ ಒಂದಿನ ಪ್ರಪೋಸ್ ಮಾಡಿದ್ದೂ ಆಯ್ತು.

ಆದ್ರೆ........................!

ನೀ ಯಾಕೆ ಹೀಗೆ ಮಾಡ್ದೇ ಅನ್ನೋದು ಮಾತ್ರ ನನಗೆ ಅರ್ಥ ಆಗ್ಲೇಇಲ್ಲ. ನಾನು ನಿನಗೆ "ಐ ಲವ್ ಯು" ಅಂತ ಹೇಳಿದಾಗ ನೀ ನನಗೆ "ನೋ" ಅಂತ ಹೇಳಿದ್ರೆ, ಸ್ವಲ್ಪ ದಿನ ದೇವದಾಸ್ ತರ ಆಗಿ, ಆಮೇಲೆ ಸರಿಹೋಗ್ತಿದ್ನೇನೋ. ಆದ್ರೆ, ನೀ ನಾ ಮಾಡಿದ ಪ್ರಪೋಸಲ್ ಗೆ, ಬರೀ ಒಂದು ಸ್ಮೇಲ್ ಕೊಟ್ಟು ಹೋಗಿಬಿಟ್ಟಿದ್ದೆ. '' ಮೌನಂ ಸಮ್ಮತಿ ಲಕ್ಷಣಂ'' ಅನ್ನುವ ಹಾಗೇನೋ! ಅಂದುಕೊಂಡು ಬಿಟ್ಟೆ ನಾ.
ಅಲ್ಲದೇ ಆ ನಿನ್ನ ಫ್ರೆಂಡ್ ಇದನಲ್ಲ ! ಅವನ ಕೈಲಿ ಹೇಳಿಕಳಿಸಿ , ನನ್ನಿಂದ ಎಷ್ಟೋ ಕರ್ಚು ಮಾಡಿಸಿಬಿಟ್ಟಿದ್ದೆ ನೀನು. ಆ ನಿನ್ನ ಬೇಡಿಕೆಗಳು ನನಗೆ ವರಗಳಂತೆ ಅನುಭವ ಕೊಡುತ್ತಿದ್ದವು. ನಿನ್ನ ಏನೇ ಬೇಡಿಕೆಗಳಿದ್ದರೂ ನಾ ಅದನ್ನ ಎಷ್ಟೇ ಕಷ್ಟವಾದರೂ ತೀರಿಸುತ್ತಿದ್ದೆ.
ನಂತರ ಒಂದು ದಿನ "ಯಾವಾಗ ನಮ್ಮ ಮನೆಯವರನ್ನ ನಿಮ್ಮ ಮನೆಗೆ ಕಳುಹಿಸಲಿ?" ಎಂದು ನಾ ನಿನಗೆ ಕೇಳಿದಾಗ ನೀ ನನಗೆ ಕೊಟ್ಟ ಉತ್ತರದ ಏಟು, ಜನ್ಮ ಜನ್ಮಗಳಿಗೂ ಮರೆಯಲು ಸಾದ್ಯವಿಲ್ಲ ಕಣೇ.

ನೀ= ಏತಕ್ಕೆ?
ನಾ= ನಮ್ಮ ಮದುವೆಯ ವಿಚಾರ ಮಾತಾಡೋಕೆ
ನೀ= ನಮ್ಮಿಬ್ರಿಗೂ ಮದುವೇನಾ? ನಿನ್ನ ಮುಖ ಒಮ್ಮೆನಾದ್ರೂ ಕನ್ನಡಿಯಲ್ಲಿ ನೋಡ್ಕೊಂಡಿದ್ಯಾ?
ನಾ= ನೀ ನನ್ನ ಲವ್ ಮಾಡ್ತೀದ್ಯಾ ಅಲ್ವಾ? ಯಾಕ್ ಹೀಗ್ ಮಾತನಾಡುತಿದ್ದಿ?
ನೀ= ಹಾಗಂತ ನಾ ಏನಾದ್ರೂ ಬಾಯಿಬಿಟ್ಟು ಹೇಳಿದ್ನ?

ಅಂತ ಮುಖಕ್ಕೆ ಹೊಡೆದ ಹಾಗೆ ಮಾತ್ನಾಡಿದ್ದೆ ನೀನು. ಈ ತರಹದ ಉತ್ತರ ಕೇಳಿ, ನಾ ಬೇರೆ ಮಾತನಾಡದೇ, ಅಲ್ಲಿಂದ ಹಿಂತಿರುಗಿ ಬಿಟ್ಟೆ.

"ಹುಡುಗಿಯರು ಮಾತ್ನಾಡೊ ಇಂತಹ ಮಾತುಗಳು ಹುಡುಗರ ಹ್ರುದಯವನ್ನ ಸೂಜಿಯಿಂದ ಚುಚ್ಚಿದ ಹಾಗೆ ಆಗುತ್ತೆ ಅಂದುಕೊಂಡಿದ್ದೆ. ಆದ್ರೆ ನಿನ್ನೀ ಮಾತಿನ ಕತ್ತಿ ನನ್ನ ಹ್ರುದಯವನ್ನ ಸೀಳಿಹಾಕಿದೆ. ಪುನಃ ಜೋಡಿಸುವುದು ನಿಜಕ್ಕೂ ಅಸಾದ್ಯ ಎನ್ನಿಸುವಹಾಗೆ.
ಇದೆಲ್ಲದರ ನಂತರ ಎನಗೆ ನನ್ನ ಬಾಳಲಿ ಮೂಡಿದ ಪ್ರಶ್ನೆ, 'ನೀ ಏಕೆ ಬಂದೆಯೇ ಎನ್ನ ಬಾಳಿಗೆ?'


ಇಂತಿ - ನಿನಗೆ ಏನೇನೂ ಅಲ್ಲದ ಹುಡುಗ.

Saturday, May 21, 2011


ನನ್ನ ಪ್ರೀತಿ ಜವಾಬ್ಧಾರಿಯ ಹುಸಿರು
ನಿನ್ನದು, ಹುಡುಗಾಟದ ಹಸಿವು
ನನ್ನ ಪ್ರೀತಿ ತ್ಯಾಗದ ಮಡಿಲು
ನಿನ್ನದು, ಸ್ವಾರ್ಥದ ಅಮಲು
ನನ್ನ ಪ್ರೀತಿ ಭವಿಷ್ಯದ ಕನಸು
ನಿನ್ನದು, ವಾತ್ಸವದ ನನಸು

Sunday, May 15, 2011

ಪದದೋಳಿಗೆ

 ಕವಿಯ ಪದಕುಂಚನೆಯ ಪ್ರಯೋಗಗಳ ಪರೀಕ್ಷೆಗೆ
ಸಮಯದಬಾವವೆಂಬ ಹುಚ್ಚು ಕಲ್ಪನೆ ಬೇಡ,
ಭಾವನೆಗಳ ಅರ್ಥೈಸಿಕೊಳ್ಳೋ ಮನಸಿದ್ದರೆ ಸಾಕು
ಭಾವನೆಗಳ ಪದದೋಳಿಗೆ ಮನಸಿಗೆ ರುಚಿಸೋಕಿಸುವುದು

ನೀನ್ಹೆಗೆ ನತದೃಷ್ಟೆ?

ಪ್ರೀತ್ಸಿ ಮೋಸ ಹೋದವರು ಕೆಲವರು ,
ಮೋಸಮಾಡಲೆಂದೇ ಪ್ರೀತಿಸುವವರು ಕೆಲವರು,
ಇವರ ನಡುವೆ, ಸ್ವಾರ್ಥ ನಿಸ್ವಾರ್ಥತೆಗಳ ತುಂಬುಪ್ರೇಮದ ಒಡೆಯನ ಪ್ರೀತಿ ನಿನ್ನದಾಗಿರುವಾಗ
ನೀನ್ಹೆಗೆ ನತದೃಷ್ಟೆ?

Tuesday, March 1, 2011

ಮಳೆಯನಿ

ಆ ಬಾರಿ, ನಿನ್ ಮನಸಿನ ಸಾಗರದಲಿ ಒಂದು ಪ್ರೀತಿಯ ಹನಿಯೂ ಎನಗಿರಲಿಲ್ಲ
ಆದರೆ ಈ ಬಾರಿ, ಆ ಸಾಗರಕೆ ಮೊದಲ ಮಳೆಯನಿ ನಾನಾಗಿಹೆ

ನಿನ್ನ ಪ್ರೀತಿಯ ಮುರಳಿ ನಾಧಕೆ

ನಿನ್ನ ಪ್ರೀತಿಯ ಮುರಳಿ ನಾಧಕೆ
ಎನ್ನ ಹೃದಯವು ಹಿಂಬಾಲಿಸಲಿಲು
ನೀ ನಿಲ್ಲಿಸಬೇಡ ದಯಮಾಡಿ
ಆ ಮೋಹಕ ಗಾನವ